ಕಲಿಕಾರ್ಥಿಗಳು ಕಲಿಕಾ ಅನುಭವಗಳನ್ನು ಹಂಚಿಕೊಳ್ಳಲು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಕಲಿಕೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇರುವ ವ್ಯವಸ್ಥೆಯೇ ವೈಯಕ್ತಿಕ ಸಂಪರ್ಕ ತರಗತಿ ಕಾರ್ಯಕ್ರಮ.
ಪ್ರತಿ ವಿಷಯಕ್ಕೆ ಒಂದು ಗಂಟೆಯ 30 ಅವಧಿಯ/ಪಿರಿಡ್‍ಗಳಂತೆ 3 ತಿಂಗಳ ಅವಧಿಯಲ್ಲಿ ಸಾಮಾನ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ತಿಂಗಳುಗಳವರೆಗೆ ಪೂರ್ವನಿಗಧಿತ ವೇಳಾಪಟ್ಟಿಯಂತೆ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಂದು ವೈಯಕ್ತಿಕ ಸಂಪರ್ಕ ತರಗತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
2024-25ನೇ ಸಾಲಿನಿಂದ ಕೆಓಎಸ್ ಮೊಬೈಲ್ ಆಪ್ ಮೂಲಕ ಎಲ್ಲಾ ವಿಷಯಗಳಲ್ಲಿ ಪ್ರತೀ ಅಧ್ಯಾಯದ ಬೋಧನಾ ಅಂಶಗಳನ್ನು 2 ರಿಂದ 3 ಗಂಟೆಗಳ ಕಾಲಾವಧಿಯಲ್ಲಿ ಸಂಪನ್ಮೂಲ ಅರ್ಹ ಶಿಕ್ಷಕರಿಂದ ಆಡಿಯೋ, ವೀಡಿಯೋ ರೆಕಾರ್ಡ್ ಮಾಡಿ ಅದನ್ನು ಕೆಓಎಸ್ ಮೊಬೈಲ್‍ಆಪ್‍ನಲ್ಲಿ ಅಪ್‍ಲೋಡ್ ಮಾಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಲಿಂಕ್ ಒದಗಿಸಲಾಗುವುದು.
ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳು ವೈಯಕ್ತಿಕ ಸಂಪರ್ಕ ತರಗತಿಗೆ ಹಾಜರಾಗುವ ಬದಲು ಸ್ವತಃ ತನ್ನ ಬಿಡುವಿನ ವೇಳೆಯಲ್ಲಿ ಮೊಬೈಲ್ ಆಪ್ ಮೂಲಕ ಪಠ್ಯವಿಷಯ ಅಧ್ಯಯನ ಮಾಡಲು ಸದಾವಕಾಶ ಲಭ್ಯವಾಗುತ್ತದೆ.