ಕರ್ನಾಟಕ ರಾಜ್ಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಿಕ್ಷಣದ ಪ್ರಮುಖವಾಹಿನಿಯಲ್ಲಿ ತೊಡಗಿಸಲು ಕರ್ನಾಟಕ ಮುಕ್ತ ವಿದ್ಯಾಲಯ ಎಂಬ ಹೆಸರಿನಲ್ಲಿ ಮುಕ್ತ ವಿದ್ಯಾಲಯವನ್ನು ತೆರೆಯಲು ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ (JSS MVP) ಇವರಿಗೆ ನವೆಂಬರ್ 1999ರ ಅಂತ್ಯದವರೆಗೆ ನಡೆಸಲು ಕರ್ನಾಟಕ ಸರ್ಕಾರವು ಅನುಮತಿ ನೀಡಿದೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಇಡಿ 52, ಎಸ್‍ಇಎಸ್ 98, ಬೆಂಗಳೂರು, ದಿನಾಂಕ 15.05.1999
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಿಕ್ಷಣದ ಪ್ರಮುಖವಾಹಿನಿಯಲ್ಲಿ ತೊಡಗಿಸಲು ಕರ್ನಾಟಕ ಮುಕ್ತ ವಿದ್ಯಾಲಯ ಎಂಬ ಹೆಸರಿನಲ್ಲಿ ಶ್ರೀ ಜಗದ್ಗುರು ಶಿವರಾತ್ರೀಶ್ವರ ಮಹಾವಿದ್ಯಾಪೀಠ (JSS MVP), ಮೈಸೂರು ಇವರಿಗೆ ಕರ್ನಾಟಕ ಮುಕ್ತ ವಿದ್ಯಾಲಯವನ್ನು ದಿನಾಂಕ 01.06.2002 ರಿಂದ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಕರ್ನಾಟಕ ಮುಕ್ತ ವಿದ್ಯಾಲಯ ನಡೆಸಲು ತಾತ್ವಿಕವಾಗಿ ಅನುಮತಿ ನೀಡಿ ಆದೇಶಿಸಿದೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಇಡಿ 52, ಎಸ್‍ಇಎಸ್ 98, ಬೆಂಗಳೂರು, ದಿನಾಂಕ 22.12.2001
ಜೆಎಸ್‍ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಯನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಮಾನ/ತತ್ಸಮಾನವೆಂದು ಕರ್ನಾಟಕ ಸರ್ಕಾರ ಆದೇಶಿಸಿದೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಇಡಿ 73 ಎಸ್‍ಎಲ್‍ಬಿ 2006, ಬೆಂಗಳೂರು, ದಿನಾಂಕ 06.09.2006
ಈ ಕೆಳಕಂಡ ಆದೇಶಗಳ ಅನ್ವಯ ಕರ್ನಾಟಕ ಮುಕ್ತ ವಿದ್ಯಾಲಯದ ಮೂಲಕ ಪ್ರವೇಶ ಪಡೆದು 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪಡೆದ ಅಂಕಪಟ್ಟಿ ಆಧಾರದ ಮೇಲೆ ಪದವಿಪೂರ್ವ ತರಗತಿಗೆ ದಾಖಲಾಗಲು ಅವಕಾಶವಿದೆ.
ಎ) ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಆದೇಶ ಸಂಖ್ಯೆ ಸಿ4(3) ಇತರೆ.54/2002-03 ದಿನಾಂಕ. 11.02.2003
ಬಿ) ಪದವಿಪೂರ್ವ ಶಿಕ್ಷಣ ಇಲಾಖೆ, ನಿರ್ದೇಶಕರ ಕಛೇರಿ ಆದೇಶ ಸಂಖ್ಯೆ ಪಪೂಶಿಇ/ಶೈಶಾ/ಕ.ಮು.ವಿ./2021-22 ದಿನಾಂಕ 07.04.2022
2006ನೇ ಸಾಲಿನ ಹಾಗೂ ಹಿಂದಿನ ಸಾಲುಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿತರಣೆಯಾಗಿರುವ ಕರ್ನಾಟಕ ಮುಕ್ತ ವಿದ್ಯಾಲಯ (ಕೆಓಎಸ್) ಪರೀಕ್ಷೆಯ ಪ್ರಮಾಣಪತ್ರ/ಅಂಕಪಟ್ಟಿಗಳನ್ನು ಎಸ್‍ಎಸ್‍ಎಲ್‍ಸಿಗೆ ತತ್ಸಮಾನವೆಂದು ಕರ್ನಾಟಕ ಸರ್ಕಾರ ಪರಿಗಣಿಸಿ ಆದೇಶಿಸಿದೆ. ಸದರಿ ಮುಕ್ತ ವಿದ್ಯಾಲಯದ ಅಂಕಪಟ್ಟಿಗಳನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಹಾಗೂ ರಾಜ್ಯದ ನಿಗಮ ಮಂಡಳಿಗಳು ಸ್ವಾಯತ್ತ ಸಂಸ್ಥೆಗಳಲ್ಲಿನ ನೇಮಕಾತಿ/ ಉದ್ಯೋಗಕ್ಕೆ ಪರಿಗಣಿಸಲು ಕರ್ನಾಟಕ ಸರ್ಕಾರದಿಂದ ಆದೇಶವಾಗಿದೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಇಪಿ 72 ಎಸ್‍ಎಲ್‍ಬಿ 2022 ಬೆಂಗಳೂರು, ದಿನಾಂಕ 30ನೇ ಜೂನ್ 2023.
ಸದರಿ ಆದೇಶದ ಮೇರೆಗೆ ಮುಕ್ತ ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸರ್ಕಾರ/ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ.