ಈ ಮೇಲೆ ತಿಳಿಸಿರುವ ದಾಖಲೆಗಳನ್ನು ಕಲಿಕಾ ಕೇಂದ್ರಗಳಿಗೆ ನೀಡುವುದು.
2024-25ನೇ ಸಾಲಿನಿಂದ ನೇರವಾಗಿ ಆನ್‌ಲೈನ್ ಮೂಲಕ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ದಾಖಲಾತಿ ಪಡೆಯುವವರು ಮೇಲ್ಕಂಡ ಎಲ್ಲಾ ದಾಖಲೆಪ್ರತಿಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಎಸ್‍ಎಸ್‍ಎಲ್‍ಸಿ ಬೋರ್ಡ್) ಪರೀಕ್ಷೆ ನಡೆಸುವ, ಪರೀಕ್ಷಾ ವೇಳಾಪಟ್ಟಿ
ಪ್ರಕಟಿಸುವ, ಪರೀಕ್ಷಾ ಅರ್ಜಿ ಮತ್ತು ಶುಲ್ಕ ಸ್ವೀಕರಿಸುವ, ಪರೀಕ್ಷಾ ಕೇಂದ್ರ ಗುರ್ತಿಸುವ, ಪರೀಕ್ಷೆ ನಡೆಸುವ, ಮೌಲ್ಯಮಾಪನ
ಕಾರ್ಯನಿರ್ವಹಿಸುವ, ಅಂಕಪಟ್ಟಿ ಪ್ರಮಾಣ ಪತ್ರ ನೀಡುವ ಹಾಗೂ ಅಂಕಪಟ್ಟಿ ತಿದ್ದುಪಡಿ ಮಾಡುವ ಕಾರ್ಯಗಳ ನಿರ್ವಹಣೆ. ಸಾಮಾನ್ಯವಾಗಿ
ಮಾರ್ಚ್/ಏಪ್ರಿಲ್‍ನಲ್ಲಿ ವಾರ್ಷಿಕಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಜುಲೈ/ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.
ವರ್ಷಕ್ಕೆ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಕಲಿಕಾರ್ಥಿಗಳು ಪ್ರವೇಶ ಪಡೆದ ನಂತರ ಮೂರು ವರ್ಷಗಳಲ್ಲಿ ಆರು ಬಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ.
• ಪ್ರಶ್ನೆ ಪತ್ರಿಕೆ ಮತ್ತು ತೇರ್ಗಡೆ ಅಂಕಗಳು ಸಾಮಾನ್ಯವಾಗಿ ಎಸ್‍ಎಸ್‍ಎಲ್‍ಸಿ ಮಾದರಿಯಂತೆಯೇ ಇರುತ್ತದೆ
• ಆರು ವಿಷಯಗಳಿಗೆ ಒಟ್ಟು 625 ಅಂಕಗಳಿಗೆ ಪರೀಕ್ಷೆ ಇರುತ್ತದೆ (ಪ್ರಥಮ ಭಾಷೆ ಕನ್ನಡಕ್ಕೆ 125 ಅಂಕ, ಉಳಿದೆರಡು ಭಾಷೆ ಮತ್ತು
ಇತರೆ ಮೂರು ವಿಷಯಗಳಿಗೆ ತಲಾ 100 ಅಂಕಗಳಿಗೆ ಪ್ರಶ್ನೆಗಳಿರುತ್ತದೆ.)
• ತೇರ್ಗಡೆ ಹೊಂದಲು ಕನಿಷ್ಠ ಒಟ್ಟು 219 ಅಂಕಗಳನ್ನು ವಿದ್ಯಾರ್ಥಿ ಪಡೆಯಬೇಕು. ಉತ್ತೀರ್ಣರಾಗಲು ಸರಾಸರಿ ಶೇ. 35 ಅಂಕಗಳನ್ನು,
ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 30 ಅಂಕಗಳನ್ನು ಪಡೆಯಲೇಬೇಕು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ (ಕೆಎಸ್‍ಇಎಬಿ) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ನೀಡಲಾಗುತ್ತದೆ. ಮುಕ್ತ ವಿದ್ಯಾಲಯದ ಸದರಿ ಅಂಕಪಟ್ಟಿಯು ಕರ್ನಾಟಕ ಸರ್ಕಾರದ ರೆಗ್ಯುಲರ್ ಎಸ್‍ಎಸ್‍ಎಲ್‍ಸಿಗೆ ತತ್ಸಮಾನವೆಂದು ಕರ್ನಾಟಕ ಸರ್ಕಾರದಿಂದ ಆದೇಶವಾಗಿದೆ. ಆದೇಶ ಸಂಖ್ಯೆ ED73 SLB 2006 ಬೆಂಗಳೂರು, ದಿನಾಂಕ 06.09.2006.
ಪರೀಕ್ಷಾ ಮಂಡಳಿ ನಿಗಧಿಪಡಿಸಿದ ಪರೀಕ್ಷಾ ಫೀ
ಮೊಬಲಗನ್ನು ಪರೀಕ್ಷಾ ಮಂಡಳಿಗೆ ನೇರವಾಗಿ ಆನ್‌ಲೈನ್ ಮೂಲಕ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ
ಪಾವತಿಸಬೇಕು. ಆನ್‌ಲೈನ್ ಮೂಲಕ ಪಾವತಿಸಿದ್ದಲ್ಲಿ ಪಾವತಿಸಿರುವ ಬಗ್ಗೆ ಆನ್‌ಲೈನ್ ರಶೀದಿಯ ಪ್ರತಿಯಲ್ಲಿ Transaction
Status – Successful (S) ನಮೂದಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
ಕ್ರ. ಸಂ. | ವಿವರ | ರೂ.ಗಳಲ್ಲಿ |
---|---|---|
1. | ದಾಖಲಾತಿ ಅರ್ಜಿ ಮತ್ತು ಪರಿಚಯ ಪತ್ರಿಕೆ ಫೀ | 100 |
2. | ನೊಂದಣಿ ಫೀ | 100 |
3. | ದಾಖಲಾತಿ ಫೀ | 100 |
4. | ಕಲಿಕಾ ಸಾಮಾಗ್ರಿ / ಪಠ್ಯ ಪುಸ್ತಕ ಫೀ | 2,250 |
5. | ವೈಯಕ್ತಿಕ ಸಂಪರ್ಕ ತರಗತಿ ಫೀ | 600 |
6. | ಸಾದಿಲ್ವಾರು ಫೀ | 100 |
ಒಟ್ಟು ಫೀ ಮೊಬಲಗು | 3,250 |
ಕ್ರ.ಸಂ. | ವಿಷಯ | ವಿಷಯ ಸಂಕೇತ | |
---|---|---|---|
1 | ಕನ್ನಡ | ಪ್ರಥಮ ಭಾಷೆ | 208 |
2 | ಇಂಗ್ಲೀಷ್ | ದ್ವಿತೀಯ ಭಾಷೆ | 202 |
3 | ಹಿಂದಿ | ತೃತೀಯ ಭಾಷೆ | 201 |
ಕ್ರ.ಸಂ. | ವಿಷಯ | ವಿಷಯ ಸಂಕೇತ |
---|---|---|
1 | ಗಣಿತ | 211 |
2 | ವಿಜ್ಞಾನ ಮತ್ತು ತಂತ್ರಜ್ಞಾನ | 212 |
3 | ಸಮಾಜ ವಿಜ್ಞಾನ | 213 |
4 | ಅರ್ಥಶಾಸ್ತ್ರ | 214 |
5 | ವಾಣಿಜ್ಯ ಅಧ್ಯಯನ | 215 |
6 | ಗೃಹ ವಿಜ್ಞಾನ | 216 |
ವಿಶೇಷ ಸೂಚನೆ : ಆರು ವಿಷಯಗಳ ಜೊತೆಗೆ ಪರೀಕ್ಷಾ ಮಂಡಳಿಯಿಂದ ಅನುಮತಿ ದೊರೆತಲ್ಲಿ 2025-26ನೇ
ಸಾಲಿನಲ್ಲಿ ಈ ಕೆಳಕಂಡ ಎರಡು ಹೊಸ ವಿಷಯಗಳನ್ನು ಪ್ರಾರಂಭಿಸಲಾಗುವುದು. ಮೇಲ್ಕಂಡ ಆರು ವಿಷಯಗಳ ಜೊತೆಗೆ ಹೊಸ ಎರಡು
ವಿಷಯಗಳನ್ನೊಳಗೊಂಡಂತೆ ಒಟ್ಟಾರೆ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.
1) ಭಾರತೀಯ ಸಂಸ್ಕೃತಿ ಮತ್ತು ಪರಂಪರೆ - 223 (Indian Culture and Heritage)
2) ಲೆಕ್ಕಶಾಸ್ತ್ರ - 224 (Accountancy)
ಜೆಎಸ್ಎಸ್ ಕರ್ನಾಟಕ ಮುಕ್ತ ವಿದ್ಯಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಸಮಯದಲ್ಲಿ ಶಾಲಾ ಆಡಳಿತ ಮಂಡಳಿ/ ಎನ್.ಜಿ.ಓ. ೫೦೦೦ರೂ.ಗಳ (ಐದು ಸಾವಿರ) ಠೇವಣಿ ಇಡಬೇಕಾಗಿರುತ್ತದೆ. ಇದನ್ನು ಹಿಂದಿರುಗಿಸುವುದಿಲ್ಲ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಪರೀಕ್ಷೆ ನಡೆಸುವ, ಮೌಲ್ಯಮಾಪನ ಮಾಡುವ, ಅಂಕಪಟ್ಟಿ ವಿತರಿಸುವ ಕಾರ್ಯನಡೆಯುತ್ತದೆ. ಕರ್ನಾಟಕ ಮುಕ್ತ ವಿದ್ಯಾಲಯದ ಪರೀಕ್ಷೆಗಳು ಸಾಧಾರಣವಾಗಿ ಇತರ ಶೈಕ್ಷಣಿಕ ಪರೀಕ್ಷೆಗಳಂತೆ ಇರುತ್ತವೆ. ವಾರ್ಷಿಕವಾಗಿ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮುಖ್ಯ ಪರೀಕ್ಷೆಯು ಮಾರ್ಚ್ / ಏಪ್ರಿಲ್ ತಿಂಗಳಲ್ಲಿಯು ಮತ್ತು ಪುನರಾವರ್ತಿತ ಪರೀಕ್ಷೆಗಳು ಜೂನ್ / ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಂದರ್ಭದಲ್ಲಿಯೇ ನಡೆಸಲಾಗುತ್ತದೆ. ವಿಶೇಷ ಕಾರಣಗಳಿಂದಾಗಿ ಪರೀಕ್ಷೆಗಳನ್ನು ಮುಂದೂಡುವ ಸಂಭವವಿರುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಸಾಮಾನ್ಯವಾಗಿ ಜ್ಞಾನ, ಗ್ರಹಿಕೆ ಮತ್ತು ಅನ್ವಯ ವಿಷಯಗಳಿಗೆ ಸಂಬಂಧಿಸಿದಂತೆ
ಇರುತ್ತದೆ. ಜ್ಞಾನಕ್ಕೆ
ಸಂಬಂಧಿಸಿದ ಪ್ರಶ್ನೆಗಳಿಗಿಂತ ಗ್ರಹಿಕೆ ಮತ್ತು ಅನ್ವಯ ಪ್ರಶ್ನೆಗಳಿಗೆ ಹೆಚ್ಚು ಒತ್ತು ನೀಡಲಾಗಿರುತ್ತದೆ.
ಪ್ರಶ್ನೆಗಳು ಸಾಧಾರಣವಾಗಿ ಸುಲಭ, ಸಾಧಾರಣ ಮತ್ತು ಕಠಿಣಕ್ಕೆ ಸಂಬಂಧಿಸಿದಂತಿರುತ್ತವೆ. ಇವುಗಳಲ್ಲಿ ನೂತನ ವಸ್ತುನಿಷ್ಠ ಮಾದರಿ
ಪ್ರಶ್ನೆಗಳು, ತುಂಬಾ
ಚಿಕ್ಕ ಉತ್ತರ ಪ್ರಶ್ನೆಗಳು, ಚಿಕ್ಕ ಉತ್ತರ ಪ್ರಶ್ನೆಗಳು ಪ್ರಬಂಧ ರೀತಿಯ ಪ್ರಶ್ನೆಗಳನ್ನು ಪ್ರತಿ ವಿಷಯಗಳಲ್ಲಿನ ಪ್ರಶ್ನೆ
ಪತ್ರಿಕೆ
ಒಳಗೊಂಡಿರುತ್ತದೆ.(ವಿದ್ಯಾರ್ಥಿಯು ತೇರ್ಗಡೆ ಹೊಂದಲು 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆದಿರಬೇಕು (ಶೇ.35).
ವಿದ್ಯಾರ್ಥಿಯು ತೇರ್ಗಡೆಗೆ ಪ್ರತಿ
ವಿಷಯದಲ್ಲಿ ಶೇ.30 ಅಂಕಗಳನ್ನು ಒಟ್ಟಾರೆ ಶೇ.35 ಅಂಕಗಳನ್ನು ಪಡೆದಿರಬೇಕು)
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪರೀಕ್ಷೆಗಳನ್ನು ರೆಗ್ಯುಲರ್ ಎಸ್ ಎಸ್ ಎಲ್ ಸಿ ಯಂತೆ ನಡೆಸುತ್ತದೆ ಮತ್ತು ಉತ್ತೀರ್ಣರಾದವರಿಗೆ ಅಂಕಪಟ್ಟಿಯನ್ನು ನೀಡುತ್ತದೆ.