ರಾಷ್ಟ್ರೀಯ ಮುಕ್ತ ವಿದ್ಯಾಲಯ (ಎನ್‌ಐಓಎಸ್) ಪ್ರಪಂಚದಲ್ಲೇ ಅತೀ ವಿಸ್ತಾರವಾದ ಜಾಲವನ್ನು ಹೊಂದಿರುವ ಉನ್ನತ ಸ್ವಾಯತ್ತ ಸಂಸ್ಥೆ. ರಾಜ್ಯಗಳಲ್ಲಿ ಮುಕ್ತ ವಿದ್ಯಾಲಯಗಳನ್ನು (ಎಸ್‌ಓಎಸ್) ಸ್ಥಾಪಿಸಲು, ವೃತ್ತಿಪರ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಭಾರತವು ಜಾಗತಿಕ ಶಿಕ್ಷಣದ ಕೇಂದ್ರವಾಗಬೇಕು. ನಿಗದಿತ ಅವಧಿಯಲ್ಲಿ ಶೇ. 100 ರಷ್ಟು ಗರಿಷ್ಠ ಸಾಕ್ಷರತೆ ಪ್ರಮಾಣದ ಗುರಿ ಸಾಧಿಸಲು ಮತ್ತು ಅತ್ಯುನ್ನತ ಸಾಕ್ಷರತಾಧರವನ್ನು ರಾಜ್ಯಗಳಲ್ಲಿ ಹೆಚ್ಚಿಸಲು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾಗಿ ಪ್ರಮಾಣಭೂತ ರಾಷ್ಟ್ರೀಯ ನೀತಿ ದಾಖಲೆಗಳ ಅನುಸಾರ, ಮುಕ್ತ ಕಲಿಕಾ ಶಿಕ್ಷಣ ವ್ಯವಸ್ಥೆಯ ಮೂಲಕ ಪದವಿಪೂರ್ವ ಹಂತದ 12ನೇ ತರಗತಿವರೆಗೆ ಸಮಾಜದಲ್ಲಿ ಹೆಚ್ಚಿನ ಸಮಾನತೆ ಹಾಗೂ ಕಲಿಕಾ ಸಮಾಜದ ವಿಕಾಸಕ್ಕಾಗಿ ಶಿಕ್ಷಣದ ಸಾರ್ವತ್ರೀಕರಣಗೊಳಿಸುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ದೇಶವಾಗಿದೆ. ರಾಷ್ಟ್ರೀಯ ಮುಕ್ತ ವಿದ್ಯಾಲಯವು ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಮಟ್ಟದ ಕಲಿಕಾರ್ಥಿಗಳ ವೈವಿದ್ಯಮಯ ಗುಂಪಿನ ಅವಶ್ಯಕತೆಗಳನ್ನು ಪೂರೈಸಲು ಆಯಾರಾಜ್ಯಗಳಲ್ಲಿ ರಾಜ್ಯ ಮುಕ್ತ ವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾದ ಮತ್ತು ನಾನಾ ಕಾರಣಗಳಿಂದಾಗಿ ಮಧ್ಯಂತರದಲ್ಲಿ ಶಾಲೆ ತೊರೆದವರಿಗೆ ಮುಕ್ತ ವಿದ್ಯಾಲಯದ ಮೂಲಕ ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸಿಕೊಡುವ ಮಹತ್ತರವಾದ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿದೆ.
ಇಂದು ಶೈಕ್ಷಣಿಕ ಪ್ರಕ್ರಿಯೆ ವಿಶ್ವದಾದ್ಯಂತ ನಿರಂತರವಾಗಿ ಬದಲಾವಣೆ ಹೊಂದುತ್ತಿದೆ. ಪ್ರಸ್ತುತ ಕಾಲಕ್ಕೆ ಅನ್ವಯವಾಗುವಂತೆ ವಿದ್ಯಾರ್ಥಿಗಳನ್ನು ಸಾಮಾಜಿಕ ಬದಲಾವಣೆಯ ರುವಾರಿಗಳನ್ನಾಗಿ ರೂಪಿಸುವ ಸದುದ್ದೇಶದಿಂದಲೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆಗಳನ್ನು ತರಲು ರಾಷ್ಟ್ರದ ಪ್ರತಿಷ್ಠಿತವಾದ ಸಂಸ್ಥೆಗಳಲ್ಲಿ ಒಂದಾದ ಜೆಎಸ್‌ಎಸ್ ಮಹಾವಿದ್ಯಾಪೀಠ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದೆ. ಈ ಮಹತ್ತರ ಕಾರ್ಯವನ್ನು ಗಮನಿಸಿದ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಮುಕ್ತ ವಿದ್ಯಾಲಯ ಆಡಳಿತ ವ್ಯವಹಾರವನ್ನು ನಿರ್ವಹಿಸಲು ಕರ್ನಾಟಕ ಸರ್ಕಾರವು ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ 1999-2000ದಲ್ಲಿ ಆದೇಶ ನೀಡಿದೆ. ಭಾರತದಲ್ಲಿ ಕರ್ನಾಟಕ ರಾಜ್ಯ ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯ “ಮುಕ್ತ ವಿದ್ಯಾಲಯ ಆಡಳಿತ ಕಾರ್ಯವನ್ನು ಆಯಾ ರಾಜ್ಯ ಸರ್ಕಾರಗಳಿಂದಲೇ ನಿರ್ವಹಿಸಲಾಗುತ್ತಿದೆ.”
ಇಂದಿನ ಸಮಾಜದಲ್ಲಿ ಯುವಕ/ಯುವತಿಯರು ಸಾಂಪ್ರದಾಯಿಕ ಶಿಕ್ಷಣದ ತರಗತಿಗಳಿಗೆ ಹೋಗಿ ಕಲಿಯಲು ಆಸಕ್ತಿ ತೋರದೆ, ಸ್ವಶಕ್ತಿಯಿಂದ ಕಲಿಯಲು ಉತ್ಸುಕರಾಗುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಅಂತರ್ಜಾಲ ವ್ಯವಸ್ಥೆಯ ಬಳಕೆಯಿಂದ ಕಲಿಯುವ ದಾಹ ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಸಿದ್ಧ ಕಲಿಕಾ ಪಠ್ಯ ವಿಷಯಗಳನ್ನು ಆಧುನಿಕ ತಂತ್ರಜ್ಞಾನದಿಂದ ಕಲಿಕೆಗೆ ವರ್ಗಾಯಿಸಿಕೊಳ್ಳುವ ಬುದ್ಧಿವಂತಿಕೆಯ ಪ್ರತಿಭೆಯನ್ನು ವಿದ್ಯಾರ್ಥಿಗಳು ಇಂದು ತೋರುತ್ತಿದ್ದಾರೆ. ಶೈಕ್ಷಣಿಕ ಕಲಿಕೆಯಲ್ಲಿರುವ ಸವಾಲುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾ, ತಮ್ಮ ಶಿಕ್ಷಣವನ್ನು ಮುಕ್ತ ವಿದ್ಯಾಲಯ ಅಥವಾ ದೂರ ಶಿಕ್ಷಣ ಮೂಲಕ ಮುಂದುವರಿಸಲು ವಿದ್ಯಾರ್ಥಿಗಳು ಇತ್ತೀಚೆಗೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಮುಕ್ತ ವಿದ್ಯಾಲಯ ಆಯಾ ರಾಜ್ಯದ ಪ್ರಾದೇಶಿಕ ಭಾಷೆಗಳಲ್ಲಿ ಬೋಧನಾ ಮಾಧ್ಯಮ ಮೂಲಕ ಶಿಕ್ಷಣ ನೀಡುತ್ತಿರುವುದರಿಂದ, ಸಮಾಜದ ನಾನಾ ಕಾರಣಗಳಿಂದ ಮಧ್ಯಂತರದಲ್ಲಿ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾದ ಕಲಿಕಾರ್ಥಿಗಳಿಗೆ ಮುಕ್ತ ವಿದ್ಯಾಲಯವು ವರದಾನವಾಗಿದೆ.
ಕರ್ನಾಟಕ ಮುಕ್ತ ವಿದ್ಯಾಲಯದ ಮೂಲಕ ಪಡೆದ ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂಪ್ರದಾಯಿಕ ಶಿಕ್ಷಣಕ್ಕೆ ತತ್ಸಮಾನ/ಸರಿಸಮಾನವಾಗಿದೆ. ಮುಕ್ತ ವಿದ್ಯಾಲಯದ ಮೂಲಕ ಶಿಕ್ಷಣ ಮಾಡಿ ಪಡೆದ ಅಂಕಪಟ್ಟಿ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳಲ್ಲಿ ಮುಂದುವರಿಸುವುದರ ಜೊತೆಗೆ, ಸರ್ಕಾರ/ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಪಡೆಯುವ ಅರ್ಹತೆಯನ್ನು ಹೊಂದುತ್ತಾರೆ.
2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ 21ನೇ ಶತಮಾನಕ್ಕೆ ಪೂರಕ ಎನಿಸುವ ಸುಭದ್ರ ಅಡಿಪಾಯದ ಶಿಕ್ಷಣ ನೀಡಲು ಬೇಕಾದ ಅಗತ್ಯ ಬದಲಾವಣೆಯೊಂದಿಗೆ, ನೂತನ ಶಿಕ್ಷಣಪದ್ಧತಿಯನ್ನು ಜಾರಿಗೊಳಿಸಲು ಜೆಎಸ್‌ಎಸ್ ಮುಕ್ತ ವಿದ್ಯಾಲಯದಲ್ಲಿಯೂ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಉನ್ನತ ಅಧಿಕಾರಿಗಳವರ ಸಹಕಾರದಿಂದ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾದವರಿಗೆ, ಶಿಕ್ಷಣವನ್ನು ಕಲಿಕಾರ್ಥಿಗಳ ಮನೆ ಬಾಗಿಲಿಗೆ ಕೊಂಡೊಯ್ಯುವ ಮಹತ್ತರ ಕಾರ್ಯಗಳಲ್ಲಿ ಕರ್ನಾಟಕ ಮುಕ್ತ ವಿದ್ಯಾಲಯ ತೊಡಗಿಸಿಕೊಂಡಿದೆೆ. “2024-25 ನೇ ಸಾಲಿನಲ್ಲಿ ಕರ್ನಾಟಕ ಮುಕ್ತ ವಿದ್ಯಾಲಯ ರಜತ ಮಹೋತ್ಸವ” ಆಚರಿಸಿಕೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ನಾನು ಕರ್ನಾಟಕ ಮುಕ್ತ ವಿದ್ಯಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವ ಸದಾವಕಾಶ ದೊರೆತಿರುವುದು ನನ್ನ ಸುದೈವ ಎಂದು ಭಾವಿಸಿದ್ದೇನೆ. 2024-25ನೇ ಸಾಲಿನಿಂದ ದಾಖಲಾತಿ ಹಾಗೂ ಸಂಪರ್ಕ ತರಗತಿಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲು KOS App ಅನ್ನು ಅನಾವರಣಗೊಳಿಸಲಾಗಿದೆ.
ಕಲಿಕಾರ್ಥಿಗಳ ಹಾಗೂ ಸಮಾಜದ ಪ್ರಸ್ತುತ ಅಗತ್ಯಗಳ ಬೇಡಿಕೆಗೆ ಅನುಗುಣವಾದ ಕೌಶಲ್ಯಾಧಾರಿತ ಅಲ್ಪಾವಧಿ ಶಿಕ್ಷಣ ಕೋರ್ಸ್‍ಗಳ ಜೊತೆಗೆ ಉನ್ನತ ಸೆಕೆಂಡರಿ 12ನೇ ತರಗತಿ ಕೋರ್ಸ್‍ಗಳನ್ನು ಕರ್ನಾಟಕ ಮುಕ್ತ ವಿದ್ಯಾಲಯದಲ್ಲಿ 10ನೇ ತರಗತಿ ಜೊತೆಗೆ ಪ್ರಾರಂಭಿಸಲು ಕಾರ್ಯೋನ್ಮುಖವಾಗಿದೆ. 2024-25ನೇ ಸಾಲಿಗೆ ಕರ್ನಾಟಕದಾದ್ಯಂತ ಪ್ರವೇಶ ಪಡೆಯಲು ಆಸಕ್ತರಾಗಿರುವ ಕಲಿಕಾರ್ಥಿಗಳಿಗೆ ಹಾಗೂ ಹೊಸದಾಗಿ ಕಲಿಕಾ ಅಧ್ಯಯನ ಕೇಂದ್ರಗಳನ್ನು ತೆರೆಯಲು ಮುಂದೆ ಬರುತ್ತಿರುವ ಸಂಸ್ಥೆಗಳ ಗಣ್ಯಮಾನ್ಯರಿಗೆ ಆದರದಿಂದ ಸ್ವಾಗತಿಸುತ್ತೇನೆ. ಈ ಮಹತ್ತರ ಕಾರ್ಯಕ್ರಮದ ವಾಹಿನಿಯಲ್ಲಿ ಪಾಲ್ಗೊಳ್ಳುತ್ತಿರುವ ತಮ್ಮೆಲ್ಲರಿಗೂ ಜೆಎಸ್‌ಎಸ್ ಆಡಳಿತ ಮಂಡಳಿ ಮತ್ತು ಮುಕ್ತ ವಿದ್ಯಾಲಯ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂಧಿಸಿ ತಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ ಶುಭಕೋರುತ್ತೇನೆ.
Sl. No. | Name Of the Directors | Period |
---|---|---|
1 | Sri Ramaprasad | 04.06.1999 to 05.10.2000 |
2 | Sri D.S.Devaraja Murthy | 06.10.2000 to 30.07.2013 |
3 | Sri Nagarajachar I/c | 31.07.2013 to 04.10.2013 |
4 | Prof. K.M.Veeraiah | 05.10.2013 to 17.09.2020 |
5 | Sri C.S. Shiva Swamy | 18.09.2020 To Date |